Job Description: ನವದೆಹಲಿ: ಪತ್ರಿಕೋದ್ಯಮ ಪ್ರತಿಷ್ಠಿತ ಪಶಸ್ತಿ ಎಂದೇ ಪರಿಗಣಿಸಲಾಗಿರುವ ಅಮೆರಿಕಾದ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಯನ್ನು ಈ ಬಾರಿ ಮೂವರು ಭಾರತದ ಕಾಶ್ಮೀರಿ ಪತ್ರಕರ್ತರಿಗೆ ಸಂದಿದೆ. ಸುದ್ದಿ ಸಂಸ್ಥೆಯಾದ ಅಸೋಸಿಯೇಟೆಡ್ ಪ್ರೆಸ್(AP)ನ ಛಾಯಾಗ್ರಾಹಕರಾದ ಜಮ್ಮು ಮತ್ತು ಕಾಶ್ಮೀರದ ಮುಖ್ತಾರ್ ಖಾನ್, ದರ್ ಯಾಸಿನ್ ಹಾಗೂ ಚನ್ನಿ ಆನಂದ್ಗೆ ಫೀಚರ್ ವಿಭಾಗದಲ್ಲಿ ಈ ಪ್ರಶಸ್ತಿ ದೊರೆತಿದೆ. 2019 ರ ಆಗಸ್ಟ್ 5 ರಂದು 370 ನೇ ವಿಧಿಯನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಂಡ ನಂತರ ಜಮ್ಮು ಮತ್ತು ಕಾಶ್ಮೀರದ ಸುದ್ದಿಗಳನ್ನು ಅಸಾಧಾರಣವಾಗಿ ಸುದ್ದಿ ಮಾಡಿದ್ದಕ್ಕೆ ಈ ವರದಿಗಾರಿಕೆಗೆ ಈ ಮೂವರಿಗೆ ಪುಲಿಟ್ಜೆರ್ ಪ್ರಶಸ್ತಿ ನೀಡಲಾಗಿದೆ ಪುಲಿಟ್ಜೆರ್ ಪ್ರಶಸ್ತಿ : ಪ್ರಶಸ್ತಿಯು 15,000 ಡಾಲರ್ (11.36 ಲಕ್ಷ ರೂ.) ನಗದು ಬಹುಮಾನವನ್ನು ಒಳಗೊಂಡಿದೆ. ಪುಲಿಟ್ಜರ್ ಅಮೆರಿಕಾ ಮೂಲದ ಪತ್ರಕರ್ತರು ಮತ್ತು ಸಂಸ್ಥೆಗಳಿಗೆ ನೀಡುವ ಅತ್ಯುನ್ನತ ಗೌರವವಾಗಿದೆ.