Job Description: ನವದೆಹಲಿ : ಭಾರತದ ಕೋವಿಡ್-19ರ ವಿರುದ್ಧದ ಹೋರಾಟಕ್ಕೆ ನೆರವಾಗಲು ಸಂಯುಕ್ತ ಅರಬ್ ಗಣರಾಜ್ಯ(UAE)ವು ಸುಮಾರು ಏಳು ಮೆಟ್ರಿಕ್ ಟನ್‌ಗಳಷ್ಟು ವೈದ್ಯಕೀಯ ಅಗತ್ಯ ಸಾಮಗ್ರಿಗಳನ್ನು ರಫ್ತುಮಾಡಿದೆ. ಈ ರಫ್ತು ಪೂರೈಕೆಯಲ್ಲಿ ಸುಮಾರು 7000 ಕೊರೋನ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ವೃತ್ತಿಪರರಿಗೆ ನೆರವಾಗಬಹುದೆಂದು UAE ತಿಳಿಸಿದೆ. * ಯುಎಇ ಈವರೆಗೆ 34ಕ್ಕೂ ಅಧಿಕ ದೇಶಗಳಿಗೆ 348 ಟನ್‌ಗೂ ಹೆಚ್ಚಿನ ವೈದ್ಯಕೀಯ ಸಾಮಗ್ರಿಗಳನ್ನು ರಫ್ತು ಮಾಡಲಾಗಿದ್ದು ಈ ಮೂಲಕ ಸುಮಾರು 3,48,000 ವೈದ್ಯಕೀಯ ವೃತ್ತಿಪರರಿಗೆ ನೆರವಾಗಿದೆ.