Job Description: ಬೆಂಗಳೂರು: ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ನಡೆಯುವ ಕೂಲಿ ಕೆಲಸದ ಬೇಡಿಕೆಯನ್ನು ಸುಲಭಗೊಳಿಸಲು ರಾಜ್ಯ ಸರ್ಕಾರದಿಂದ 'ಕಾಯಕ ಮಿತ್ರ' ಆಯಪ್ ಅನ್ನು ಬಿಡುಗಡೆ ಮಾಡಲಾಗಿದೆ. * ಈ ಆಯಪ್ ಮೂಲಕ ಕೂಲಿ ಬೇಡಿಕೆ ಸಲ್ಲಿಸಲು ಲಾಗಿನ್ ನೋಂದಣಿಯ ಅವಶ್ಯಕತೆ ಇರುವದಿಲ್ಲ. ಸುಮಾರು 15 ದಿನಗಳ ವರೆಗೆ ಕೂಲಿ ಮನವಿ ಸಲ್ಲಿಸಬಹುದು. * ಉದ್ಯೋಗ ಚೀಟಿ ಹೊಂದಿರಬೇಕು. * ಕೃಷಿ ಹೊಂಡ, ಬದು ನಿರ್ಮಾಣ, ತೋಟಗಾರಿಕೆ, ರೇಷ್ಮೆ, ಕೃಷಿ, ಅರಣ್ಯ, ಎರೆಹುಳು ಗೊಬ್ಬರ ತೊಟ್ಟಿ ನಿರ್ಮಾಣಕ್ಕೆ ಸೇರಿ ವಿವಿಧ ಕೃಷಿ ಬೇಡಿಕೆ ಸಲ್ಲಿಸಲು ಅವಕಾಶನೀಡಲಾಗಿದೆ.