Job Description: ಬೆಂಗಳೂರು : ಕಳೆದ ಬಾರಿ ಬೆಂಗಳೂರಿನಲ್ಲಿ ನಡೆದ ಏರ್ ಶೋ ಹಲವು ಅವಘಡಗಳಿಗೆ ಕಾರಣವಾಗಿದ್ದರಿಂದ ಮುಂದಿನ ಏರ್ ಶೋ ಇಲ್ಲಿ ನಡೆಯುವದು ಅನುಮಾನ ಮೂಡಿಸಿದ್ದರಿಂದ ಬೇಸರದಲ್ಲಿದ್ದ ರಾಜ್ಯದ ಜನತೆಗೆ ರಕ್ಷಣಾ ಇಲಾಖೆ ಖುಷಿಯ ವಿಚಾರ ತಿಳಿಸಿದ್ದು, ಬೆಂಗಳೂರಲ್ಲೇ ಮುಂದಿನ ಏರ್‌ಶೋ ನಡೆಸಲು ರಕ್ಷಣಾ ಇಲಾಖೆ ನಿರ್ಧರಿಸಿದೆ. * ಪ್ರತಿ ಎರಡು ವರ್ಷಕ್ಕೊಮ್ಮೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ ಆಯೋಜಿಸಲಾಗುತ್ತಿದೆ. * ಫೆ.3 ರಿಂದ 7ರವರೆಗೆ ಯಲಹಂಕ ವಾಯನೆಲೆಯಲ್ಲಿ 13ನೇ ಆವೃತ್ತಿಯ ಏರ್ ಶೋ ನಡೆಯಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.