Job Description: ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು “ಭಾರತ್ ಪಾಧೆ ಆನ್‌ಲೈನ್ ಅಭಿಯಾನ” (Bharat Padhe Online Campaign) ಎಂಬ ಒಂದು ವಾರದ ಅಭಿಯಾನ ಆರಂಭಿಸಿದೆ. ಈ ಅಭಿಯಾನದ ಮೂಲಕ ಲಾಕ್ ಡೌನ್ ಸಮಯದಭಾರತದಲ್ಲಿ ಆನ್‌ಲೈನ್ ಶಿಕ್ಷಣವನ್ನು ಉತ್ತಮಪಡಿಸುವ ಗುರಿಯನ್ನು ಹೊಂದಿದೆ. * ಡಿಜಿಟಲ್ ಶಿಕ್ಷಣವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬರಬಹುದಾದ ಕುಂದು ಕೊರತೆಗಳನ್ನು ನೀಗಿಸಲು ದೇಶದ ಶೈಕ್ಷಣಿಕ ತಜ್ಞರನ್ನು ಅವರ ಜ್ಞಾನ ಮತ್ತು ಪರಿಹಾರಗಳನ್ನು ಹಂಚಿಕೊಳ್ಳಲು ವೇದಿಕೆ ಕಲ್ಪಿಸುವುದೇ ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.