Job Description: ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು(KVIC) ಎರಡು ಪದರುಗಳನ್ನು ಹೊಂದಿದ ಖಾದಿ ಮುಖಗವಸುಗಳನ್ನು ಅಭಿವೃದ್ಧಿಪಡಿಸಿದೆ. ಪ್ರಸ್ತುತ ಈ ಮುಖಗವಸುಗಳನ್ನು ಬೇಡಿಕೆಗೆ ತಕ್ಕಂತೆ ಬಾರಿ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದೆ. ಎರಡು ಪದರದ ಖಾದಿ ಮುಖವಾಡಗಳಿಗೆ ಬೇಡಿಕೆ ಹೆಚ್ಚುತ್ತಿದ್ದು ಇತ್ತೀಚೆಗೆ, ಜಮ್ಮು ಕಾಶ್ಮೀರ ಸರ್ಕಾರವೊಂದೇ 7.4 ಲಕ್ಷದಷ್ಟು ಬೇಡಿಕೆಯನ್ನು KVIC ಗೆ ಸಲ್ಲಿಸಿದೆ. * ಈ ಮಾಸ್ಕುಗಳು 70% ತೇವಾಂಶವನ್ನು ಹೀರಿಕೊಳ್ಳುತ್ತವೆ ಮತ್ತು ಗಾಳಿಗೆ ಸುಲಭವಾದ ಮಾರ್ಗವನ್ನು ಒದಗಿಸುತ್ತದೆ. * ಈ ಮಾಸ್ಕುಗಳನ್ನು ತಯಾರಿಸಲು ಬಳಸುವ ಬಟ್ಟೆಯು ಕೈಯಿಂದ ತಿರುಗಿಸಲ್ಪಟ್ಟಿದೆ * ಈ ಮಾಸ್ಕುಗಳನ್ನು ತೊಳೆಯಬಹುದು, ಜೈವಿಕ ವಿಘಟನೀಯ ಮತ್ತು ಮರುಬಳಕೆ ಮಾಡಬಹುದಾಗಿದೆ.