Job Description: ಬೆಂಗಳೂರು: ಜಗತ್ತಿನಾದ್ಯಂತ ವ್ಯಾಪಿಸಿರುವ ಕೊರೋನಾ ವೈರಸ್ ಭೀತಿಯಿಂದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಲಾಕ್'ಡೌನ್ ನಿಂದಾಗಿ ಹಲವಾರು ಕೂಲಿ ಕಾರ್ಮಿಕರು ಸೇರಿ ಬಡವರ ಮೇಲೆ ತೀವ್ರ ಪರಿಣಾಮ ಬೀರಿದ್ದು, ಇದನ್ನರಿತ ರಾಜ್ಯ ಸರ್ಕಾರವು ಬಡವರ ಹಸಿವು ನೀಗಿಸುವ ಸಲುವಾಗಿ "ದಾಸೋಹ-2020" ಎಂಬ ಹೊಸ ಆಯಪ್ ವೊಂದನ್ನು ಬಿಡುಗಡೆಗೊಳಿಸಿದೆ. ಸರ್ಕಾರ ಬಿಡುಗಡೆಗೊಳಿಸಿರುವ ಈ ಅಯಪ್ swiggy ಹಾಗೂ Zomato ರೀತಿ ಕಾರ್ಯ ನಿರ್ವಹಿಸುತ್ತದೆ. ಈ ಆಯಪ್ ಗಳ ಮೂಲಕ ಆಹಾರಕ್ಕಾಗಿ ಮನವಿ ಮಾಡುವ ಬಡವರಿಗೆ, ಸ್ವಯಂಸೇವಕರು ಆಹಾರ ಹಾಗೂ ಪಡಿತರಗಳನ್ನು ವಿತರಿಸಲಿದ್ದಾರೆ.