Job Description: ಸ್ಮಾರ್ಟ್ ಸಿಟಿ ಮಿಷನ್ ಯೋಜನೆ ಅಡಿಯಲ್ಲಿ ನಗರಗಳನ್ನು ಸೋಂಕು ಮುಕ್ತಗೊಳಿಸಲು ಕೇಂದ್ರ ಸರ್ಕಾರ ಬೃಹತ್ ಕಾರ್ಯಕ್ರಮವನ್ನು ಯೋಜಿಸಿದೆ. ಈ ಕಾರ್ಯಕ್ರಮದಡಿಯಲ್ಲಿ, ಸ್ಮಾರ್ಟ್ ಸಿಟಿ ಯೋಜನೆಯ ನಗರಗಲ್ಲಿ ಸಾರ್ವಜನಿಕ ಸ್ಥಳಗಳಾದ ಮಾರುಕಟ್ಟೆಗಳು, ಬೀದಿಗಳು, ಉದ್ಯಾನವನಗಳು, ಆಟದ ಮೈದಾನಗಳು ಮತ್ತು ಶಾಪಿಂಗ್ ಮಾಲ್ ಗಳನ್ನು ಸೋಂಕು ಮುಕ್ತಗೊಳಿಸಲು ಕ್ರಮಕೈಗೊಳ್ಳಲಾಗುವದು. * ಈ ನೂತನ ಕಾರ್ಯಕ್ರಮದಡಿಯಲ್ಲಿ ಕೋವಿಡ್-19 ವೈರಸ್ ನಿಯಂತ್ರಿಸಲು ಸಾರ್ವಜನಿಕ ಸ್ಥಳಗಳಲ್ಲಿ ರಾಸಾಯನಿಕ ಸಿಂಪಡಿಸಲಾಗುವದು ಈ ಮೂಲಕ ಸೋಂಕುಗಳನ್ನು ಸುಲಭವಾಗಿ ನಿಷ್ಕ್ರಿಯಗೊಳಿಸಬಹುದು. * ಬೀದಿಗಳನ್ನು ಸ್ವಚ್ ಗೊಳಿಸಲು ಅಗ್ನಿಶಾಮಕ ಮತ್ತು ವಾಟರ್ ವಾಶ್ ಪಂಪ್‌ಗಳನ್ನು ಬಳಸಲಾಗುತ್ತಿದೆ. * ಕೆಲವು ಸ್ಮಾರ್ಟ್ ನಗರಗಳು ಸೋಡಿಯಂ ಹೈಪೋಕ್ಲೋರೈಟ್ ಬಳಸಿ ಸಾರ್ವಜನಿಕ ಸ್ಥಳಗಳ ಸ್ವಚ್ಛಗೊಳಿಸುತ್ತಿವೆ. * ಇನ್ನು ಕೆಲವು ಸ್ಮಾರ್ಟ್ ಸಿಟಿಗಳಲ್ಲಿ ಸೋಂಕು ತಡೆಯಲು ಮಾನವ ಸುರಂಗಗಳನ್ನು ರಚಿಸಲಾಗಿದೆ. ಜನರು ಈ ಸುರಂಗಗಳನ್ನು ಪ್ರವೇಶಿಸಿದಾಗ ಸೋಂಕು ರಹಿತವಾಗುತ್ತಾರೆ. * ಬೆಂಗಳೂರು, ಚೆನ್ನೈ ಮತ್ತು ರಾಯ್‌ಪುರಗಳಲ್ಲಿ ಸಾರ್ವಜನಿಕ ಸ್ಥಳಗಳನ್ನು ಸೋಂಕುರಹಿತಗೊಳಿಸಲು ಡ್ರೋನ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ.