Job Description: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ದೇಶದಲ್ಲಿ COVID-19 ಸೋಂಕಿನ ವಿರುದ್ಧ ಹೋರಾಡಲು ಮತ್ತು ಅದನ್ನು ಹತ್ತಿಕ್ಕುವ ಸಲುವಾಗಿ “ಸಮಾಧಾನ್” ಎಂಬ ಸವಾಲನ್ನು ಆರಂಭಿಸಿದೆ. ಈ ಮೆಗಾ ಆನ್‌ಲೈನ್ ಸವಾಲನ್ನು ಫೋರ್ಜ್(Forge) ಮತ್ತು ಇನ್ನೋವೇಶನ್ ಕ್ಯೂರಿಸ್ (Innovation Curis) ಜೊತೆಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ನವೀನ ಕೋಶ ಮತ್ತು AITCE (ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ) ಪ್ರಾರಂಭಿಸಿದೆ. * "ಸಮಾಧನ್" ಎಂಬ ಸವಾಲು ವಿದ್ಯಾರ್ಥಿಗಳಿಗೆ ನೂತನ ಆವಿಸ್ಕಾರಗಳನ್ನು ಮಾಡಲು ಮತ್ತು ಹೊಸ ಪ್ರಯೋಗಗಳ ಪ್ರೇರೇಪಿಸುವ ಉದ್ದೇಶ ಹೊಂದಿದ್ದು, COVID-19 ರ ವಿರುದ್ಧ ಹೋರಾಡಲು ಸಹಾಯ ಮಾಡುವ ಪರಿಹಾರಗಳೊಂದಿಗೆ ಬರಲಿದೆ. ಈ ಸವಾಲಿನಡಿಯಲ್ಲಿ ಆಯ್ದ ಪ್ರಯೋಗ ಮತ್ತು ಆವಿಸ್ಕಾರಗಳನ್ನು ಸರ್ಕಾರಿ ಆಸ್ಪತ್ರೆಗಳು, ಆರೋಗ್ಯ ಸೇವೆ ಮತ್ತು ಇತರ ಸೇವೆಗಳಲ್ಲಿ ಜಾರಿಗೆ ತರಲಾಗುವುದು