Job Description: ಬೆಂಗಳೂರು : ಕಳೆದ ಆರು ದಶಕಗಳಿಗೂ ಹೆಚ್ಚು ಕಾಲ ಮಾಧ್ಯಮ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ್ದ ಹಾಗೂ ಬೆಂಗಳೂರಿನ ಮೊದಲ ಛಾಯಾಗ್ರಾಹಕ ಎಂಬ ಹೆಗ್ಗಳಿಕೆ ಹೊಂದಿರುವ ಹಿರಿಯ ಛಾಯಾಗ್ರಾಹಕರಾದ ಟಿ.ಎಲ್.ರಾಮಸ್ವಾಮಿ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. * ಮೈಸೂರು ನ್ಯೂಸ್ ಫೋಟೊಸ್ ಎಂಬ ಸಂಸ್ಥೆ ಆರಂಭಿಸಿದ್ದರು * ಜಮ್ಮು ಮತ್ತು ಪಂಜಾಬ್ ಗಡಿಗಳಲ್ಲಿ ಸಮವಸ್ತ್ರ ಧರಿಸಿ ಯುದ್ಧ ವರದಿಯ ತರಬೇತಿ ಪಡೆದಿದ್ದರು. * ಕರ್ನಾಟಕ ರಾಜ್ಯ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಪಡೆದಿದ್ದರು