Job Description: ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ "ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ" ವು "ಕರೋನಾ ಸ್ಟಡೀಸ್" ಎಂಬ ಪುಸ್ತಕ ಸರಣಿಯನ್ನು ಆರಂಭಿಸಿದೆ. ಈ ಪುಸ್ತಕ ಸರಣಿಯು ಕರೋನಾ ವೈರಸ್ ಬಗ್ಗೆ ಸಂಬಂಧಿತ ಎಲ್ಲ ಮಾಹಿತಿಯನ್ನು ಒದಗಿಸುತ್ತದಲ್ಲದೆ, ಎಲ್ಲಾ ವಯಸ್ಸಿನವರಿಗೆ ಸೂಕ್ತವಾದ ಮಾರ್ಗದರ್ಶನ ನೀಡುತ್ತದೆ. * ಜನರಲ್ಲಿ ವೈರಸ್ ಬಗ್ಗೆ ಸಾಮಾಜಿಕ, ಆರ್ಥಿಕ, ಮಾನಸಿಕ ಮತ್ತು ಸಾಂಸ್ಕೃತಿಕ ಜಾಗೃತಿ ಮೂಡಿಸಲು ಈ ಯೋಜನೆಯನ್ನು ಆರಂಭಿಸಲಾಗಿದೆ. * ಈ ಪುಸ್ತಕ ಸರಣಿಯು ಸಂಶೋಧಕರು ಮತ್ತು ಲೇಖಕರು ತಮ್ಮ ಜ್ಞಾನವನ್ನು ಕೊಡುಗೆ ನೀಡುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.