Job Description: ಬೆಂಗಳೂರು: ಕರ್ನಾಟಕದ ಬೀದಿ ಬದಿ ವ್ಯಾಪಾರ ಮಾಡುವವರಿಗೆ ನೀಡುವ ಕಿರುಸಾಲದ ಯೋಜನೆಯಾದ "ಬಡವರ ಬಂಧು ಯೋಜನೆ"ಯ ಸಾಲವನ್ನು ಮನ್ನಾ ಮಾಡಲಾಗುವುದೆಂದು ಮುಖ್ಯಮಂತ್ರಿ B S ಯಡಿಯೂರಪ್ಪ ವಿಧಾನ ಪರಿಷತ್ತಿನಲ್ಲಿ ಘೋಷಿಸಿದರು. ಈ ಯೋಜನೆಯ ಒಟ್ಟು 13.20 ಕೋಟಿ ರೂಪಾಯಿ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. * ಇದೇ ವೇಳೆ ಎರಡು ವಿಧೇಯಕಗಳ ಅಂಗೀಕಾರ ಮಾಡಲಾಯಿತು. ಫೈನಾನ್ಸ್ ಬಿಲ್ ಹಾಗೂ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ವಿಧೇಯಕಗಳಿಗೆ ಅಂಗೀಕಾರ ನೀಡಲಾಯಿತು.