Job Description: ನವದೆಹಲಿ : ಭಾರತದಲ್ಲಿ ದಿನೇ ದಿನೇ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್ ನಿಯಂತ್ರಣಕ್ಕೆ ಭಾರತ ಸರ್ಕಾರವು ಈಗಾಗಲೇ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಈಗ ಆಯುಷ್ಮಾನ್ ಭಾರತ್ ಯೋಜನೆಗೆ ಕೊರೊನಾ ವೈರಸ್ ಪ್ಯಾಕೇಜ್ ಸೇರಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ. ದೇಶದಲ್ಲಿ ಪ್ರಸ್ತುತ ಸರ್ಕಾರೀ ಮತ್ತು ಖಾಸಗಿ ಸೇರಿ 111 ಲ್ಯಾಬ್ ಗಳಲ್ಲಿ ಕರೋನ ವೈರಸ್ ಪರೀಕ್ಷಿಸಲಾಗುತ್ತಿದ್ದು, ಆದರೆ, ಖಾಸಗಿ ಲ್ಯಾಬ್ ನಲ್ಲಿನ ಕೊರೊನಾ ಪರೀಕ್ಷೆಯು ತುಂಬಾ ದುಬಾರಿಯಾಗಿದ್ದು, ಹೀಗಾಗಿ ಕೇಂದ್ರ ಸರ್ಕಾರದ ಆಯುಷ್ಮಾನ್ ಯೋಜನೆ ಫಲಾನುಭವಿಗಳೂ ಉಚಿತವಾಗಿ ಕೊರೊನಾ ವೈರಸ್ ಪರೀಕ್ಷೆ ಮಾಡಿಸಿಕೊಳ್ಳಲು ಅನುವು ಮಾಡಿಕೊಟ್ಟಿದೆ.