Job Description: ಭಾರತ ಸರ್ಕಾರವು 2015ರಲ್ಲಿ ನ್ಯಾಷನಲ್ ಸೂಪರ್ ಕಂಪ್ಯೂಟರ್ ಮಿಷನ್ ಅನ್ನು ಪ್ರಾರಂಭಿಸಿತು. ಇಲ್ಲಿಗೆ ಭಾರತ ಸರ್ಕಾರವು 5 ಸೂಪರ್ ಕಂಪ್ಯೂಟರ್‌ಗಳನ್ನು ಹೊಂದಿದ್ದು, ಇವು ವಿಶ್ವದ ಟಾಪ್ 500 ಸೂಪರ್ ಕಂಪ್ಯೂಟರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಸಧ್ಯ 3 ಸೂಪರ್ ಕಂಪ್ಯೂಟರ್‌ಗಳನ್ನು ಐಐಟಿ-ಕಾನ್ಪುರ್, ಐಐಟಿ-ಹೈದರಾಬಾದ್ ಮತ್ತು ಜೆಎನ್ ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್‌ನಲ್ಲಿ 2020 ರ ಏಪ್ರಿಲ್‌ನಲ್ಲಿ ಸ್ಥಾಪಿಸಲಾಗುವುದು. 2020 ರ ಈ ವರ್ಷ ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಮಿಷನ್ ಗೆ ಹೆಚ್ಚು ಮುಖ್ಯವಾಗಿದೆ. ಕಾರಣ, ಡಿಸೆಂಬರ್ 2020 ರ ವೇಳೆಯೊಳಗಾಗಿ NIT, IIT ಮತ್ತು IISER ಗಳಲ್ಲಿ 11 ಹೊಸ ಸೂಪರ್ ಕಂಪ್ಯೂಟರ್ ವ್ಯವಸ್ಥೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. * ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯಾಲಜಿ ಇಂಡಿಯಾದಲ್ಲಿನ ಸೂಪರ್ ಕಂಪ್ಯೂಟರ್ (ಪ್ರತ್ಯುಷ್) 39 ನೇ ಸ್ಥಾನ ಪಡೆದಿದೆ. * ಮಧ್ಯಮ ಹವಾಮಾನ ಮುನ್ಸೂಚನೆಗಾಗಿ ರಾಷ್ಟ್ರೀಯ ಕೇಂದ್ರದಲ್ಲಿರುವ ಸೂಪರ್ ಕಂಪ್ಯೂಟರ್ 66 ನೇ ಸ್ಥಾನದಲ್ಲಿದೆ. * ಮೊದಲ ಶ್ರೇಯಾಂಕದ ಸೂಪರ್ ಕಂಪ್ಯೂಟರ್ ಅಮೆರಿಕಾದ ರಿಡ್ಜ್ ನ್ಯಾಷನಲ್ ಲ್ಯಾಬೊರೇಟರಿಯಲ್ಲಿ ಇದೆ.