Job Description: ನವದೆಹಲಿ: ಬ್ರಿಟಿಷರ ವಿರುದ್ಧ ಹೋರಾಡಿ ಭಾರತಕ್ಕೆ ಸ್ವತಂತ್ರ ಕೊಡಿಸುವಲ್ಲಿ ಹೋರಾಡಿ ತಮ್ಮದೇ ಆದ ದೇಶ ಸೇವೆ ನೀಡಿ ಕೊನೆಗೆ ಬ್ರಿಟಿಷರಿಂದ ಗಲ್ಲು ಶಿಕ್ಷೆಗೊಳಗಾದ ಭಗತ್ ಸಿಂಗ್, ರಾಜ್ಗುರು ಮತ್ತು ಸುಖದೇವ್ ಈ ವೀರಯೋಧರನ್ನು ಗಲ್ಲಿಗೇರಿಸಿದ ದಿನವಿದು. 1931ರಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಈ ಮೂರು ವೀರ ಯೋಧರ ಸ್ಮರಣಾರ್ಥ ಪ್ರತಿ ವರ್ಷ ಈ ದಿನವನ್ನು ಹುತಾತ್ಮರ ದಿನವಾಗಿ ಆಚರಿಸಿಕೊಂಡು ಬಂದಿದ್ದಾರೆ, ಇಂದು ಪ್ರಧಾನಿ ಮೋದಿ ಸೇರಿದಂತೆ ಕೆಲವು ರಾಜಕೀಯ ಮುಖಂಡರು ಈ ವೀರರ ಸ್ಮರಣೆ ಮಾಡಿದ್ದಾರೆ.