Job Description: ಪ್ರತಿ ವರ್ಷದ ದಿನಾಂಕ ಮಾರ್ಚ್ 18 ರಂದು ಜಾಗತಿಕ ಮರುಬಳಕೆ ದಿನವಾಗಿ ಆಚರಿಸಲಾಗುತ್ತಿದೆ. ಯಾವ ವಸ್ತುಗಳನ್ನು ಮರುಬಳಕೆ ಮಾಡಲು ಸಾಧ್ಯವೋ ಆ ವಸ್ತುಗಳನ್ನು “ಏಳನೇ ಸಂಪನ್ಮೂಲ” ಎಂದು ಕರೆಯಲಾಗುತ್ತದೆ. ವಿಶ್ವಸಂಸ್ಥೆಯ ಪ್ರಕಾರ ಪ್ರತಿವರ್ಷ ಸುಮಾರು 700 ಮಿಲಿಯನ್ ಟನ್ ನಷ್ಟು ಕಾರ್ಬನ್-ಡೈಆಕ್ಸೈಡ್ ಅನ್ನು ಉಳಿಸಲು ಅವು ಸಹಾಯ ಮಾಡುತ್ತವೆ. ಘೋಷವಾಕ್ಯ: ಮರುಬಳಕೆ ಮಾಡುವ ನಾಯಕರು (Recycling Heroes) ವಿಶ್ವಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಸ್ಥೆಯು ಈ ದಿನವನ್ನು ಬೆಂಬಲಿಸುತ್ತದೆ. ಈ ದಿನ ಆಚರಣೆಯ ಮುಖ್ಯ ಉದ್ದೇಶವೆಂದರೆ "ಉಳಿದ ತ್ಯಾಜ್ಯದ ಪ್ರಮಾಣವನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದಾಗಿದೆ"