Job Description: ನವದೆಹಲಿ : ದೇಶದಲ್ಲಿ ವ್ಯಪಾಕವಾಗಿ ಹರಡುತ್ತಾ ಜನರಲ್ಲಿ ತೀವ್ರ ಆತಂಕ ಹುಟ್ಟಿಸಿರುವ ಕೊರೊನಾ ವೈರಸ್ ಸೋಂಕು ಹರಡದಂತೆ ಭಾರತೀಯರು ಸಂಯಮ ಹಾಗೂ ಸಂಕಲ್ಪ ಹೊಂದಬೇಕು ಎಂದು ಮೋದಿಯವರು ಗುರುವಾರ ತಿಳಿಸಿದರು. ಇದರೊಟ್ಟಿಗೆ ಹಲವು ಮುಂಜಾಗ್ರತಾ ಸೂಚನೆಗಳನ್ನು ಪಾಲಿಸುವಂತೆ ಜನರಲ್ಲಿ ಮನವಿ ಮಾಡಿದರು. ಅಲ್ಲದೇ ಪ್ರಮುಖವಾಗಿ ಕೊರೊನಾ ವಿರುದ್ಧ ಹೋರಾಟದ ರೂಪವಾಗಿ ಮಾರ್ಚ್ 22 ರಂದು ಬೆಳಿಗ್ಗೆ 8 ರಿಂದ ರಾತ್ರಿ 9 ರವೆರೆಗೆ ಜನತಾ ಕರ್ಪ್ಯೂ ಆಚರಿಸುವಂತೆ ಜನರಿಗೆ ಕರೆ ನೀಡಿದ್ದಾರೆ. ಜನರು ಭಯಪಡುವ ಅಗತ್ಯವಿಲ್ಲ ಸರ್ಕಾರ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವುದಾಗಿ ಅಭಯ ನೀಡಿದ್ದಾರೆ.