Job Description: ಭಾರತದಲ್ಲಿ ಕರೋನಾ ಸೋಂಕು ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ಈಗಾಗಲೇ ಸೋಂಕು ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ಕರೋನಾ ಭಾರತದಲ್ಲಿ ಸ್ಟೇಜ್ 2 ಹಂತ ತಲುಪಿದೆ. - ಹಂತ 1: ಸೋಂಕಿತ ಸ್ಥಳಗಳಿಂದ ವೈರಸ್ ಹರಡುವ ಪ್ರಕರಣಗಳು. - ಹಂತ 2: ಸ್ಥಳೀಯ ಜನರಲ್ಲಿ ಹರಡಲು ಪ್ರಾರಂಭಿಸುತ್ತದೆ. ಪ್ರಕರಣಗಳು ಹೆಚ್ಚಾಗಲು ಪ್ರಾರಂಭಿಸುತ್ತವೆ. - ಹಂತ 3: ದೊಡ್ಡ ಪ್ರಮಾಣದಲ್ಲಿ ಇದು ಸಮುದಾಯಗಳು, ನೆರೆಹೊರೆಗಳಲ್ಲಿ ಹರಡಲು ಪ್ರಾರಂಭಿಸುತ್ತದೆ. - ಹಂತ 4: ರೋಗವು ಸಾಂಕ್ರಾಮಿಕ ರೋಗವಾಗಿ ಬದಲಾಗುತ್ತದೆ. ಅದು ಯಾವಾಗ ಮತ್ತು ಎಲ್ಲಿ ಕೊನೆಗೊಳ್ಳುತ್ತದೆ ಎಂದು ಹೇಳುವುದು ಕಷ್ಟ. * ಇಟಲಿ, ಚೀನಾದಲ್ಲಿ ಕರೋನಾ ಸಾಂಕ್ರಾಮಿಕ ರೋಗವಾಗಿ ಮಾರ್ಪಟ್ಟಿದೆ.