Job Description: ಪೊಟ್‍ಚೆಫ್‍ಸ್ಟ್ರೂಮ್ (ದಕ್ಷಿಣ ಆಫ್ರಿಕಾ) : 2020 ರಲ್ಲಿ ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್ ಗೆ ಭಾರತದ ಜಾವೆಲಿನ್ ಎಸೆತಗಾರ ಶಿವಪಾಲ್ ಸಿಂಗ್ ಅರ್ಹತೆ ಪಡೆದಿದ್ದಾರೆ, ಈ ಮೂಲಕ ಇದೆ ಮೊದಲ ಬಾರಿಗೆ ಇವರು ಒಲಂಪಿಕ್‍ನಲ್ಲಿ ಭಾಗವಹಿಸಲಿದ್ದಾರೆ. * ಭಾರತದ ಸ್ಟಾರ್ ಅಥ್ಲೀಟ್ ನೀರಜ್ ಚೋಪ್ರಾ ಈಗಾಗಲೇ ಈ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ. * ದಕ್ಷಿಣ ಆಫ್ರಿಕಾದ ಪೊಟ್‍ಚೆಫ್‍ಸ್ಟ್ರೂಮ್‍ನ ಎಸಿಎನ್‍ಡಬ್ಲ್ಯು ಕ್ರೀಡಾಕೂಟದ ಭರ್ಜಿ ಎಸೆತ ಪಂದ್ಯದಲ್ಲಿ ಶಿವಪಾಲ್ ಸಿಂಗ್ 85.47 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಚಿನ್ನದ ಪದಕ ಪಡೆದರು.