Job Description: ಬೆಂಗಳೂರು : ಚೀನಾದಲ್ಲಿ ಪತ್ತೆಯಾಗಿ ಇಡೀ ಜಗತ್ತಿಗೆ ಮಾರಣಾಂತಿಕವಾಗಿ ಕಾಡುತ್ತಿರುವ ಕೊರೊನಾ ವೈರಸ್ ಈಗ ಜಗತ್ತಿನಾದ್ಯಂತ ಹರಡಿದೆ. ಭಾರತವು ಸೇರಿದಂತೆ ಒಟ್ಟು 69 ರಾಷ್ಟ್ರಗಳಿಗೆ ಈ ವೈರಸ್ ಈಗಾಗಲೇ ಹರಡಿದೆ. ಕರ್ನಾಟಕದಲ್ಲೂ ಕೆಲ ಪ್ರಕರಣಗಳು ದಾಖಲಾದ ಹಿನ್ನಲೆಯಲ್ಲಿ ಇದರಿಂದ ಜನರನ್ನು ಪಾರು ಮಾಡುವ ಸಲುವಾಗಿ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ ಕೊರೋನಾ ವೈರಸ್ (ಕೊವಿಡ್-19)ನ್ನು ಸಾಂಕ್ರಾಮಿಕ ರೋಗ ಎಂದು ಘೋಷಣೆ ಮಾಡಿದೆ.