Job Description: ನವದೆಹಲಿ : ಸಾಹಿತಿ ದೇವನೂರ ಮಹಾದೇವ ಅವರ ಇಂಗ್ಲಿಷ್‌ಗೆ ಭಾಷಾಂತರವಾಗಿರುವ 'ಕುಸುಮಬಾಲೆ' ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯು ನೀಡುವ 2019ನೇ ಸಾಲಿನ ಭಾಷಾಂತರ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಸಾಹಿತಿ ದೇವನೂರ ಮಹಾದೇವ ಅವರ 'ಕುಸುಮಬಾಲೆ' ಕೃತಿಯನ್ನು ಸುಸಾನ್ ಡೇನಿಯೆಲ್ ಅವರು ಇಂಗ್ಲಿಷ್ ಭಾಷೆಗೆ ಭಾಷಾಂತರಿಸಿದ್ದಾರೆ. * ರಾಜಸ್ಥಾನಿ ಭಾಷೆಗೆ ಅನುವಾದಗೊಂಡಿರುವ 'ಚಾರು-ವಸಂತ' ಕಾವ್ಯವೂ ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ಕೃತಿಯನ್ನು ಹಂ.ಪ.ನಾಗರಾಜಯ್ಯ ರಚಿಸಿದ್ದಾರೆ. * ಈ ಕೃತಿಯನ್ನು ದೇವ್ ಕೊಠಾರಿ ಅವರು ಅನುವಾದಿಸಿದ್ದಾರೆ. ಪ್ರಶಸ್ತಿಯು ₹50 ಸಾವಿರ ನಗದು, ತಾಮ್ರ ಫಲಕವನ್ನು ಒಳಗೊಂಡಿದೆ.