Job Description: ನವದೆಹಲಿ : ಸುಮಾರು 15 ಕ್ಕೂ ಹೆಚ್ಚಿನ ಬದಲಾವಣೆಗಳೊಂದಿಗೆ ಬಾಡಿಗೆ ತಾಯ್ತನ(ತಿದ್ದುಪಡಿ) ಕಾಯ್ದೆ 2020ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಅನುಮತಿ ನೀಡಿದೆ. ಈ ಕಾಯ್ದೆಯ ಪ್ರಕಾರ ಯಾವುದೇ ಮಹಿಳೆಯು ತನ್ನ ಸ್ವಇಚ್ಛೆಯಿಂದ ಬಾಡಿಗೆ ತಾಯ್ತನವನ್ನು ಒಪ್ಪಿಕೊಳ್ಳಬಹುದು. ವಿಧವೆಯರು, ವಿವಾಹ ವಿಚ್ಛೇದಿತರಿಗೂ ಆಯ್ಕೆ ಮಾಡಿಕೊಳ್ಳಲು ಈ ಕಾಯ್ದೆಯಲ್ಲಿ ಸ್ವಾತಂತ್ರ್ಯ ನೀಡಲಾಗಿದೆ. * ಬಾಡಿಗೆ ತಾಯಿ : ಬಾಡಿಗೆ ತಾಯಿ ಎಂದರೆ ಒಬ್ಬ ಮಹಿಳೆಯು ತನ್ನ ಸ್ವಇಚ್ಛೆಯಿಂದ ಕೃತಕ ಗರ್ಭಧಾರಣೆ ಮೂಲಕ ಯಾವುದೇ ವ್ಯಕ್ತಿ/ದಂಪತಿಗಾಗಿ ಮಗುವನ್ನು ಹೆತ್ತುಕೊಡುವುದಾಗಿದೆ.