Job Description: 1) ಐಸೆನ್‌ಹೋವರ್ (1959) ಭಾರತಕ್ಕೆ ಭೇಟಿ ನೀಡಿದ ಅಮೆರಿಕ ಅಧ್ಯಕ್ಷರ ಪೈಕಿ ಡ್ವೈಟ್ ಡಿ. ಐಸೆನ್‌ಹೋವರ್ ಮೊದಲಿಗರು. ಆ ಸಮಯದಲ್ಲಿ ಜವಾಹರಲಾಲ್ ನೆಹರೂ ಪ್ರಧಾನಿಯಾಗಿದ್ದರು. 2) ರಿಚರ್ಡ್ ನಿಕ್ಸನ್ (1969) ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಮಯದಲ್ಲಿ ಭಾರತ ಹಾಗೂ ಪಾಕಿಸ್ತಾನದ ಸಂಬಂಧದ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ರಿಚರ್ಡ್ ನಿಕ್ಸನ್ ಅವರು ಭಾರತಕ್ಕೆ ಭೇಟಿನೀಡಿದ್ದರು. 3) ಜಿಮ್ಮಿ ಕಾರ್ಟರ್ (1978) ಮೂರು ದಿನಗಳ ಅಧಿಕೃತ ಪ್ರವಾಸದಲ್ಲಿ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಅವರನ್ನು ಭೇಟಿ ಮಾಡಿದ್ದರು. ಭಾರತದಲ್ಲಿ ಜಿಮ್ಮಿ ಕಾರ್ಟರ್‌ಗೆ ಐತಿಹಾಸಿಕ ಸ್ವಾಗತ ಸಿಕ್ಕಿತ್ತು. 4) ಬಿಲ್ ಕ್ಲಿಂಟನ್ (2000) ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಮಯದಲ್ಲಿ ಭೇಟಿ ನೀಡಿದ ಇವರು ಕಾರ್ಗಿಲ್ ಯುದ್ಧದ ಸಮಯದಲ್ಲಿ ಮಧ್ಯಪ್ರವೇಶಿಸಿ, ಪಾಕ್ ಪಡೆಗಳನ್ನು ವಾಪಸ್ ಪಡೆಯುವಂತೆ ನವಾಜ್ ಷರೀಫ್‌ಗೆ ಸೂಚಿಸಿದ್ದರು. ಅಮೆರಿಕದ ಪಾಕ್ ಪರವಾದ ನಿಲುವು ಬದಲಾಗಿದ್ದು ಇಲ್ಲಿಂದ. 5) ಜಾರ್ಜ್ ಬುಷ್ (2006) ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಮತ್ತು ಜಾರ್ಜ್ ಬುಷ್ ಅವರು ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ್ದರು. 6) ಬರಾಕ್ ಒಬಾಮ (2010) ಭಾರತ ಹಾಗೂ ಅಮೆರಿಕ ನಡುವಿನ ಆರ್ಥಿಕ ಒಪ್ಪಂದಗಳಾದ ರಕ್ಷಣೆ, ರಫ್ತು ಹಾಗೂ ಬಂಡವಾಳ ಹೂಡಿಕೆಗಳು ಬಲಗೊಂಡವು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ವತ್ವ ಪಡೆಯಲು ಭಾರತವನ್ನು ಒಬಾಮ ಬೆಂಬಲಿಸಿದ್ದರು. * ಮತ್ತೆ 2015ರಲ್ಲಿ ಪ್ರಧಾನಿ ಮೋದಿ ಅವರ ಆಡಳಿತ ಸಮಯದಲ್ಲಿ ಭಾರತಕ್ಕೆ ಎರಡನೇ ಭಾರಿ ಭೇಟಿ ನೀಡಿ 66ನೇ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು.