Job Description: ಭಾರತದ 2 ದಿನಗಳ ಬೇಟಿಯಲ್ಲಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೊದಲು ಸಬರ್ ಮತಿ ಆಶ್ರಮ ನಂತರ ಮೊಟೆರಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ದಿನದ ಕೊನೆಯಲ್ಲಿ ಆಗ್ರಾದಲ್ಲಿರುವ ತಾಜ್ ಮಹಲ್ ಗೆ ಭೇಟಿ ನೀಡಿ ಸೂರ್ಯಾಸ್ತವನ್ನು ಕಣ್ತುಂಬಿಕೊಂಡರು. ಬಳಿಕ ಮಹಲಿನ ಎದುರು ವಿಹರಿಸಿ, ಫೋಟೋಗಳಿಗೆ ಪೋಸ್ ನೀಡಿ ಟ್ರಂಪ್ ದಂಪತಿ ತಾಜ್ ಮಹಲ್ ಸೌಂದರ್ಯಕ್ಕೆ ಬೆರಗಾದರು. "ತಾಜ್ ಮಹಲ್ ಭಾರತದ ಶ್ರೀಮಂತ ಸಂಸ್ಕೃತಿಗೆ ಸಾರ್ವಕಾಲಿಕ ಸಾಕ್ಷಿ" ಎಂದು ಟ್ರಂಪ್ ಸಂದರ್ಶಕರ ಪುಸ್ತಕದಲ್ಲಿ ಬರೆದು ಮೆಚ್ಚುಗೆ ವ್ಯಕ್ತಪಡಿಸಿದರು.