Job Description: ನವದೆಹಲಿ : ಭಾರತದಲ್ಲಿ ತಯಾರಾದ ವೈದ್ಯಕೀಯ ಉಪಕರಣಗಳ ಕೊರತೆ ಇರುವುದ ಮನಗಂಡು ಕೆಲ ನಿರ್ದಿಷ್ಟ ವೈದ್ಯಕೀಯ ಉಪಕರಣಗಳನ್ನು ಚೀನಾಕ್ಕೆ ರಫ್ತು ಮಾಡಲು ಭಾರತ ನಿರ್ಬಂಧಿಸಿದೆ. ಇದಲ್ಲದೆ, ಮಾರಕ ಕೊರೋನಾ ವೈರಸ್ ಸೋಂಕು ವ್ಯಪಾಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು (WHO) ನೀಡಿದ ಸಲಹೆಗನುಗುಣವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ.