Job Description: ನವದೆಹಲಿ: ಇದೆ ಫೆಬ್ರುವರಿ 24 ರಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಭೇಟಿನೀಡಲಿದ್ದಾರೆ. ಈ ವೇಳೆ ಭಾರತವು ಅಮೆರಿಕಾದೊಂದಿಗೆ ಐದು ಪ್ರಮುಖ ಒಪ್ಪಂದಗಳನ್ನೂ ಮಾಡಿಕೊಳ್ಳುವ ಬಗ್ಗೆ ನಿರೀಕ್ಷಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಒಪ್ಪಂದಗಳಾಗಬಹುದಾದ ಕ್ಷೇತ್ರಗಳು : * ಬೌದ್ಧಿಕ ಆಸ್ತಿ ಹಕ್ಕು * ವ್ಯಾಪಾರ ಸೌಲಭ್ಯ * ರಾಷ್ಟ್ರೀಯ ಭದ್ರತೆ * ಭಯೋತ್ಪಾದನೆ ನಿಗ್ರಹಕ್ಕೆ ಸಹಕಾರ * ರಕ್ಷಣೆ-ವ್ಯಾಪಾರ ಕ್ಷೇತ್ರದ ಬಾಂಧವ್ಯ ವೃದ್ಧಿ * ಎಚ್1ಬಿ ವೀಸಾ ಕುರಿತಾದ ಭಾರತದ ಕಳವಳ ಸೇರಿ ಮುಂತಾದ ವಿಷಯಗಳು ಮೋದಿ ಮತ್ತು ಟ್ರಂಪ್ ನಡುವೆ ನಡೆಯುವ ದ್ವಿಪಕ್ಷೀಯ ಮಾತುಕತೆ ವೇಳೆ ಪ್ರಮುಖವಾಗಿ ಚರ್ಚೆಯಾಗಬಹುದಾದ ವಿಷಯಗಳಾಗಿವೆ.