Job Description: ಬ್ರಿಟನ್‌ನ ದೇಶವು ಅಂಕಗಳ ಆಧಾರಿತ ವೀಸಾ ನೀಡುವ ನೂತನ ವ್ಯವಸ್ಥೆಯನ್ನು ಜಾರಿತಂದಿದೆ. ಈ ನೂತನ ವ್ಯವಸ್ಥೆಯು ಬ್ರಿಟನ್ ದೇಶಕ್ಕೆ ಬರುವ ಉತ್ತಮ ಕೌಶಲ್ಯ ಹೊಂದಿದವರರನ್ನು ಆಕರ್ಷಿಸುವ ಮತ್ತು ದೇಶಕ್ಕೆ ಬರುವ ಕಡಿಮೆ ಕೌಶಲದ ಕೆಲಸಗಾರರ ಸಂಖ್ಯೆಯನ್ನು ವಿರಳಗೊಳಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯು 2021 ಜನವರಿ 1ರಿಂದ ಜಾರಿಗೆ ಬರಲಿದೆ ಎಂದು ಅಲ್ಲಿನ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಘೋಷಿಸಿದ್ದಾರೆ. ನೂತನ ವೀಸಾ ವ್ಯವಸ್ಥೆಯಲ್ಲಿ ವೀಸಾ ಜನರಿಗೆ ನಿರ್ದಿಷ್ಟ ಕೌಶಲಗಳು, ಅರ್ಹತೆಗಳು, ವೇತನಗಳು ಮತ್ತು ಕೆಲಸಗಳಿಗೆ ತಕ್ಕಂತೆ ಅಂಕಗಳನ್ನು ನೀಡಲಾಗುತ್ತದೆ ಮತ್ತು ಅತಿ ಹೆಚ್ಚು ಅಂಕಗಳಿಸುವವರಿಗೆ ವೀಸಾ ನೀಡುವಲ್ಲಿ ಆಧ್ಯತೆ ನೀಡಲಾಗುವದು.