Job Description: ಕನ್ನಡದ ಖ್ಯಾತ ಹಿರಿಯ ನಟಿ ಕಿಶೋರಿ ಬಲ್ಲಾಳ್ ಅವರು ವಿಧಿವಶರಾದರು. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನಟಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ. ಕಿಶೋರಿ ಬಲ್ಲಾಳ್ ಅವರು ಮೂಲತಃ ರಂಗಭೂಮಿ ಕಲಾವಿದೆಯಾಗಿದ್ದರು ನಂತರ ಸಿನಿಮಾ, ಜಾಹೀರಾತುಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದಿದ್ದರು * ಕಿಶೋರಿ ಬಲ್ಲಾಳ್ ಅವರ ಮೊದಲ ಚಿತ್ರ: 'ಇವಳೆಂಥಾ ಹೆಂಡತಿ' (1960) * ಇವರು ಸುಮಾರು 75ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. * ಹಿಂದಿಯಲ್ಲಿ ಶಾರೂಖ್ ಜೊತೆ 'ಸ್ವದೇಶ್' ಚಿತ್ರದಲ್ಲಿ ಕೂಡ ನಟಿಸಿ ಅಪಾರ ಮನ್ನಣೆಗೆ ಪಾತ್ರವಾಗಿದ್ದರು.