Job Description: ನ್ಯೂಯಾರ್ಕ್: ಹಾಲಿವುಡ್ ಲೆಜೆಂಡ್ ಕಿರ್ಕ್ ಡೌಗ್ಲಾಸ್ ಅವರು ನಿಧನರಾಗಿದ್ದಾರೆ. 103 ವರ್ಷದ ಕಿರ್ಕ್ ಡೌಗ್ಲಾಸ್ ಬುಧವಾರ ನಿಧನರಾಗಿದ್ದಾರೆ. ಸುಮಾರು ಏಳು ದಶಕಗಳ ಕಾಲ ಚಿತ್ರ ಜಗತ್ತಿನಲ್ಲಿ ಕಳೆದಿದ್ದ ಕಿರ್ಕ್ ಡೌಗ್ಲಾಸ್ 90ಕ್ಕೂ ಹೆಚ್ಚು ಚಿತ್ರಗಳನ್ನು ಮಾಡಿದ್ದರು. 1950ರ ಮತ್ತು 60ರ ಅತೀ ದೊಡ್ಡ ಬಾಕ್ಸ್ ಆಫಿಸ್ ಹಿಟ್ ಗಳಾದ ಸ್ಪಾರ್ಟಕಸ್, ದಿ ವಿಕಿಂಗ್ಸ್ ಗಳಿಂದ ಕಿರ್ಕ್ ಡೌಗ್ಲಾಸ್ ಜನಪ್ರಿಯತೆಯ ತುತ್ತ ತುದಿಯನ್ನು ತಲುಪಿದ್ದರು.