Job Description: ದೇಶದ ವಿಷಯಾಧಾರಿತ ದತ್ತಾಂಶಗಳನ್ನು ಇದೇ ಮೊದಲು ಒಟ್ಟುಗೂಡಿಸಿದ ISRO. ಇದಕ್ಕೆ “ಭುವನ್ ಪಂಚಾಯತ್ 3.0′ ಎಂದು ಹೆಸರಿಡಲಾಗಿದೆ. ಭಾರತದ 2.56 ಲಕ್ಷ ಗ್ರಾಮ ಪಂಚಾಯತ್‌ಗಳ ಸಮಗ್ರ ಮಾಹಿತಿಗಳಾದ ಜನಸಂಖ್ಯೆ, ಭೂಪ್ರದೇಶ, ಆಧಾರ್ ಬಳಕೆ, ಆರೋಗ್ಯ, ಶಿಕ್ಷಣ, ಸಾಮಾಜಿಕ-ಆರ್ಥಿಕ ಸ್ಥಿತಿ, ಹವಾಮಾನ ಇವೆಲ್ಲ ಮಾಹಿತಿಗಳನ್ನು ಒಂದೇ ಜಿಯೊ ಪೋರ್ಟಲ್‌ನಲ್ಲಿ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಸರಕಾರ ರೂಪಿಸುವ ಯೋಜನೆಗಳಿಗೆ ಇದುನೆರವಾಗುತ್ತದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.