Job Description: ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪ್ರಕಟಗೊಂಡಿದ್ದು, ಕರ್ನಾಟಕದ ಇಬ್ಬರು ತೆರೆ-ಮರೆ ಸಾಧಕರಿಗೆ ಪ್ರದ್ಮಶ್ರೀ ಪ್ರಶಸ್ತಿ ದೊರೆತಿದೆ. ಒಟ್ಟು 21 ಮಂದಿ ವಿವಿಧ ಸಾಧಕರಿಗೆ 2020 ನೇ ಸಾಲಿನ ಪದ್ಮಶ್ರೀ ಗೌರವ ದೊರೆತಿದ್ದು, ಇದರಲ್ಲಿ ಇಬ್ಬರು ಕರ್ನಾಟಕದ ಸಾಧಕರಾಗಿದ್ದಾರೆ. ಅರಣ್ಯದ ಬಗ್ಗೆ ಅಪಾರ ಜ್ಞಾನ ಹೊಂದಿರುವ ಅರಣ್ಯ ರಕ್ಷಕಿ, ಹಾಲಕ್ಕಿ ಸಮುದಾಯದ 72 ವರ್ಷ ವಯಸ್ಸಿನ ತುಳಸಿ ಗೌಡ ಅವರಿಗೆ ಹಾಗೂ ಅಕ್ಷರ ಸಂತ ಹರೆಕಲ ಹಾಜಬ್ಬ ಅವರಿಗೆ ಪದ್ಮಶ್ರೀ ಗೌರವಕ್ಕೆ ಪ್ರಾಪ್ತರಾಗಿದ್ದಾರೆ.