Job Description: ದಾವೋಸ್: ಭಾರತದ ಅರ್ಥ ವ್ಯವಸ್ಥೆಯಲ್ಲಿ ಸದ್ಯ ಕಂಡು ಬರುತ್ತಿರುವ ನಿಧಾನಗತಿಯ ಅಭಿವೃದ್ಧಿ ಕೇವಲ ತಾತ್ಕಾಲಿಕ. ಮುಂದಿನ ದಿನಗಳಲ್ಲಿ ಅದು ಸುಧಾರಿಸಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜೆವಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸ್ವಿಟ್ಸರ್ಲಂಡ್‌ನ ದಾವೋಸ್‌ನಲ್ಲಿ ವಿಶ್ವ ಆರ್ಥಿಕ ಶೃಂಗದಲ್ಲಿ ಮಾತನಾಡಿದ ಅವರು, ಹಾಲಿ ವರ್ಷದ ಜನವರಿಯಲ್ಲಿ ವಿಶ್ವದ ಆರ್ಥಿಕ ಸ್ಥಿತಿ ಉತ್ತಮವಾಗಿಯೇ ಇದೆ. ಆದರೆ ಶೇ.3.3ರ ಅಭಿವೃದ್ಧಿ ಎನ್ನುವುದು ಜಗತ್ತಿಗೆ ಉತ್ತಮ ಸಂದೇಶವಲ್ಲ ಎಂದು ಹೇಳಿದ್ದಾರೆ. ಜಗತ್ತಿನ ರಾಷ್ಟ್ರಗಳು ಪರಿಣಾಮಕಾರಿಯಾಗಿರುವ ವಿತ್ತೀಯ ನೀತಿಗಳನ್ನು ಕೈಗೊಳ್ಳಬೇಕು ಎಂದಿದ್ದಾರೆ.