Job Description: ಮಂಗಳೂರು: ದೇಸಿ ಜ್ಞಾನಗಳನ್ನು ಉಳಿಸಿ-ಬೆಳೆಸಲು ಗೋಕರ್ಣದ ಅಶೋಕೆಯಲ್ಲಿ ರಾಮಚಂದ್ರಾಪುರ ಮಠವು ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪಿಸಲಿದ್ದು, ಏಪ್ರಿಲ್ 26ರಂದು ಲೋಕಾರ್ಪಣೆಗೊಳ್ಳಲಿದೆ. ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ, 12 ನಿಕಾಯ, 80 ವಿಭಾಗ ಹಾಗೂ 280 ವಿದ್ಯೆಗಳನ್ನು ಕಲಿಸಲಾಗುವುದು. ಪ್ರಮಾಣ ಪತ್ರ, ಬೋಧಕರು, ಕೋರ್ಸ್ ಮತ್ತಿತರ ಸ್ವರೂಪಗಳ ಕುರಿತು ಸಿದ್ಧತೆಗಳು ನಡೆಯುತ್ತಿವೆ. ಆರಂಭದಲ್ಲಿ 100 ವಿದ್ಯಾರ್ಥಿಗಳಿಂದ ಶುರು ಮಾಡಲಿದ್ದು, 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕಲಿಸುವ ಗುರಿ ಇದೆ' ಎಂದು ವಿವರಿಸಿದರು.