Job Description: ದಾವೋಸ್: ನವೆಂಬರ್ 3 ರಿಂದ 5ರ ವರೆಗೆ ನಡೆಯಲಿರುವ ಜಾಗತಿಕ "ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಜಾಗತಿಕ ಹೂಡಿಕೆದಾರರ ಶೃಂಗಸಭೆಯಲ್ಲಿ " ಆವಿಷ್ಕಾರ ಈಗ - ಅಭಿವೃದ್ದಿ ನಿರಂತರ" ಕರ್ಟನ್ ರೈಸರ್ ಅನ್ನು ಬುಧವಾರ ರಾತ್ರಿ ನೆರವೇರಿಸಿದರು. ಈ ಜಾಗತಿಕ ಹೂಡಿಕೆದಾರರ ಸಮಾವೇಶವು ನವೆಂಬರ್ 3 ರಿಂದ 5 ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಅಧಿಕೃತ ದಿನಾಂಕ ಘೋಷಿಸಿದರು. ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ಪ್ರಮುಖ ಕೈಗಾರಿಕೋದ್ಯಮಿಗಳು, ಉದ್ಯಮಿಗಳು ಮತ್ತು ಕಂಪನಿ ಪ್ರತಿನಿಧಿಗಳು ಭಾಗವಹಿಸಿದ್ದರು