Job Description: ನವದೆಹಲಿ: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ದಿ ಎಕನಾಮಿಸ್ಟ್ಸ್ ಡೆಮಾಕ್ರಸಿ ಇಂಡೆಕ್ಸ್ 2019 ರಲ್ಲಿ (ಅರ್ಥಶಾಸ್ತ್ರಜ್ಞರ ಪ್ರಜಾಪ್ರಭುತ್ವ ಸೂಚ್ಯಂಕ) 10 ಸ್ಥಾನಗಳ ಕುಸಿತ ಕಂಡಿದ್ದು 51ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. 2018ರಲ್ಲಿ 7.23 ಅಂಕ ಗಳಿಸಿದ್ದ ಭಾರತ, 2019ರ ಸಾಲಿನಲ್ಲಿ ಕೇವಲ 6.9 ಅಂಕ ಗಳಿಸಿದೆ. ಈ ಮೂಲಕ ಭಾರತವನ್ನು "ದೋಷಪೂರಿತ ಪ್ರಜಾಪ್ರಭುತ್ವ" ಎಂದು ವರ್ಗೀಕರಿಸಲಾಗಿದೆ. ಸುದ್ದಿ ಹಾಗು ಸಾಮಾನ್ಯ ವ್ಯವಹಾರಗಳ ಪ್ರಕಟಣಾ ಸಂಸ್ಥೆ 'ದಿ ಇಕನಾಮಿಸ್ಟ್ ಇಂಟಲಿಜೆನ್ಸ್ ಯುನಿಟ್' ತನ್ನ ವಾರ್ಷಿಕ ವರದಿಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದೆ. ಈ ಪಟ್ಟಿಯಲ್ಲಿ 165 ದೇಶಗಳ ಪೈಕಿ ಭಾರತ 51ನೆ ಸ್ಥಾನದಲ್ಲಿದೆ. ಭಾರತವು 10ರಲ್ಲಿ 6.9 ಅಂಕಗಳನ್ನು ಗಳಿಸಿದೆ. 2017 ಮತ್ತು 2018ರಲ್ಲಿ ಭಾರತವು 7.23, 2016ರಲ್ಲಿ 7.81 ಅಂಗಳನ್ನು ಗಳಿಸಿತ್ತು. 2014ರಲ್ಲಿ ಅತೀ ಹೆಚ್ಚು ಅಂದರೆ 7.91 ಅಂಕಗಳನ್ನು ದೇಶವು ಗಳಿಸಿತ್ತು. "ದೇಶದಲ್ಲಿ ನಾಗರಿಕ ಸ್ವಾತಂತ್ರ್ಯಗಳಿಗೆ ಅಡ್ಡಿಯೇ ಪ್ರಜಾಪ್ರಭುತ್ವದ ಹಿಂಜರಿತಕ್ಕೆ ಕಾರಣ" ಎಂದು ವರದಿ ತಿಳಿಸಿದೆ.