Job Description: ಮೈಸೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ತಸ್ನೀಂ, ಉಪಮೇಯರ್ ಆಗಿ ಸಿ.ಶ್ರೀಧರ್ ಆಯ್ಕೆಯಾಗಿದ್ದಾರೆ. ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಶನಿವಾರ ಎರಡನೇ ಅವಧಿಗೆ ಪ್ರಾದೇಶಿಕ ಆಯುಕ್ತ ಯಶವಂತ್ ಚುನಾವಣೆ ಪ್ರಕ್ರಿಯೆ ನಡೆಸಿದರು. ಕಾಂಗ್ರೆಸ್,- ಜೆಡಿಎಸ್ ಎರಡನೇ ಅವದಿಗೂ ಮೈತ್ರಿ ಮುಂದುವರಿಸಿದ್ದು, ಎರಡನೇ ಅವಧಿಗೆ 26ನೇ ಮೀನಾ ಬಝಾರ್ ವಾಡ್೯ನ ಜೆಡಿಎಸ್ ಅಭ್ಯರ್ಥಿ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ತಸ್ನೀಂ ಬಿಜೆಪಿಯ ಗೀತಾಶ್ರೀ ಯೋಗಾನಂದ ವಿರುದ್ದ 47 ಮತಗಳನ್ನು ಪಡೆದು ಆಯ್ಕೆಯಾದರು.