Job Description: ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ 10 ಲಕ್ಷ ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದಾಗಿ ವಿಶ್ವದ ಅತಿದೊಡ್ಡ ಆನ್‌ಲೈನ್ ಖರೀದಿ ತಾಣವಾಗಿರುವ ಅಮೆಜಾನ್ ಪ್ರಕಟಿಸಿದೆ. ‘ಐ.ಟಿ, ಕೌಶಲ ಅಭಿವೃದ್ಧಿ, ಮಾಹಿತಿ ಸೃಷ್ಟಿ, ರಿಟೇಲ್, ಸರಕು ಸಾಗಣೆ ಮತ್ತು ತಯಾರಿಕೆ ಕ್ಷೇತ್ರಗಳಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 10 ಲಕ್ಷ ಹೊಸ ಉದ್ಯೋಗ ಸೃಷ್ಟಿಸಲು ಅಮೆಜಾನ್ ಯೋಜನೆ ಹಾಕಿಕೊಂಡಿದೆ’ ಎಂದು ಕಂಪನಿಯ ಸ್ಥಾಪಕ ಮತ್ತು ಸಿಇಒ ಜೆಫ್ ಬೆಜೊಸ್ ಹೇಳಿದ್ದಾರೆ