Job Description: ಹಸುವಿನ ಸಗಣಿಯ ಕುರಿತು ಹೆಚ್ಚಿನ ಸಂಶೋಧನೆಗಳನ್ನು ನಡೆಸುವಂತೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿಜ್ಞಾನಿಗಳಿಗೆ ಸಲಹೆ ನೀಡಿದ್ದಾರೆ. ಹಸು ಹಾಲು ಕೊಡುವುದನ್ನು ನಿಲ್ಲಿಸಿದ ನಂತರವೂ ರೈತರಿಗೆ ಅವುಗಳನ್ನು ಸಾಕುವುದು ಆರ್ಥಿಕವಾಗಿ ಲಾಭದಾಯಕವಾಗುವಂತೆ ಮಾಡಲು ಈ ಸಂಶೋಧನೆ ನೆರವಾಗಬಹುದು. ರೈತರು ಹಸುಗಳ ಸಗಣಿಯಿಂದ ಮತ್ತು ಮೂತ್ರದಿಂದಲೂ ಹಣ ಸಂಪಾದನೆ ಮಾಡಲು ಸಾಧ್ಯವಾದರೆ ಅವರು ಗೊಡ್ಡು ಹಸುಗಳನ್ನು ಹೊರಹಾಕುವುದಿಲ್ಲ ಎಂದರು. ಹಾಲು, ಸಗಣಿ ಮತ್ತು ಗೋಮೂತ್ರಗಳ ಮೌಲ್ಯವರ್ಧನೆ ಮಾಡುವುದರಿಂದ ದೇಶದ ಆರ್ಥಿಕತೆಗೆ ದೊಡ್ಡಮಟ್ಟದ ಕೊಡುಗೆ ಸಿಗುತ್ತದೆ. ಕೃಷಿಗೆ ತೊಡಗಿಸುವ ವೆಚ್ಚ ಕಡಿಮೆಯಾದರೆ ಹಳ್ಳಿಗಳು ಮತ್ತು ರೈತರು ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.