Job Description: ಟೇಕ್ವಾಂಡೊ ಕ್ರೀಡೆಯಲ್ಲಿ ಒಂದು ಗಂಟೆ ನಿರಂತರವಾಗಿ ಅತ್ಯಧಿಕ "ಫುಲ್‌ಕಾಂಟ್ಯಾಕ್ಟ್ ನೀಸ್ಟ್ರೈಕ್" ಮಾಡಿದ ದಾಖಲೆಗೆ ಇಲ್ಲಿನ ಐದು ವರ್ಷದ ಪೋರ ಅಶ್ಮನ್ ತನೇಜಾ ಪಾತ್ರನಾಗಿದ್ದಾನೆ. ಟೇಕ್ವಾಂಡೊದಲ್ಲಿ ನಂಬಲಸಾಧ್ಯ ಸಾಧನೆ ಮಾಡಿದ ಈ ಪುಟ್ಟ ಬಾಲಕ ಕಿರಿಯ ವಯಸ್ಸಿನಲ್ಲೇ ಉತ್ತಮ ಅಥ್ಲೀಟ್. ಈ ಪುಟಾಣಿ ಅಮೆರಿಕದಲ್ಲಿ ನಡೆದ ವಿಶ್ವ ಮುಕ್ತ ಟೇಕ್ವಾಂಡೊ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿಪದಕ ಗೆದ್ದಿದ್ದು, ಇದೀಗ ಗಿನ್ನಿಸ್ ದಾಖಲೆ ಹೊಂದಿದ ಕೀರ್ತಿಗೂ ಪಾತ್ರನಾಗಿದ್ದಾನೆ. ಒಂದು ಗಂಟೆಯಲ್ಲಿ ನಿರಂತರ 1,200 ಫುಲ್ ಕಾಂಟ್ಯಾಕ್ಟ್ ನೀ ಸ್ಟ್ರೈಕ್ ಮಾಡಿದ ಈತ ಈ ಅಪೂರ್ವ ಸಾಧನೆ ಮಾಡಿದ್ದಾನೆ. "ವಿಶ್ವದಾಖಲೆಗಾಗಿ ಸಾಕಷ್ಟು ಅಭ್ಯಾಸ ನಡೆಸಿದ್ದ. ಅಕ್ಕನಿಂದ ಸ್ಫೂರ್ತಿ ಪಡೆದು ತೀರಾ ಚಿಕ್ಕ ವಯಸ್ಸಿನಲ್ಲೇ ತರಬೇತಿ ಪಡೆಯಲು ಆರಂಭಿಸಿದ್ದ. ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಈತ" ಎಂದು ತಂದೆ ಆಶೀಶ್ ತನೇಜಾ ಸಂತಸ ವ್ಯಕ್ತಪಡಿಸಿದರು.