Job Description: ಕರ್ನಾಟಕದ ಅತ್ಯಂತ ಶ್ರೀಮಂತ ದೇವಾಲಯಗಳ ಪಟ್ಟಿ ಪ್ರಕಟವಾಗಿದ್ದು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ನಂಬರ್ 1 ಸ್ಥಾನ ಪಡೆದುಕೊಂಡಿದೆ. ಮುಜರಾಯಿ ಇಲಾಖೆಯು ರಾಜ್ಯದ ಟಾಪ್-10 ಶ್ರೀಮಂತ ದೇವಾಲಯಗಳ ಪಟ್ಟಿ ಬಿಡುಗಡೆ ಮಾಡಿದ್ದು, 100 ಕೋಟಿ ರೂ. ಆದಾಯ ಗಳಿಸಿರುವ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಅತ್ಯಂತ ಶ್ರೀಮಂತ ದೇವಸ್ಥಾನವಾಗಿದೆ. ಕರ್ನಾಟಕದ ಟಾಪ್-10 ಶ್ರೀಮಂತ ದೇವಾಲಯಗಳ ಪಟ್ಟಿ ಕುಕ್ಕೆ ಸುಬ್ರಮಣ್ಯ ದೇವಸ್ಥಾನ (100 ಕೋಟಿ ರೂ.) ಕೊಲ್ಲೂರು ಮೂಕಾಂಬಿಕೆ (90-92 ಕೋಟಿ ರೂ.) ಕಟೀಲು ದುರ್ಗಾ ಪರಮೇಶ್ವರಿ (40-42 ಕೋಟಿ ರೂ.) ಚಾಮುಂಡೇಶ್ವರಿ ದೇವಾಲಯ ( 30-33 ಕೋಟಿ ರೂ.) ನಂಜನಗೂಡು ಶ್ರೀಕಂಠೇಶ್ವರ (15-20 ಕೋಟಿ ರೂ.) ಮಂದರ್ತಿ ದೇವಾಲಯ (10-12 ಕೋಟಿ ರೂ.) ಗುಳಗಮ್ಮ ದೇವಾಲಯ (8-10 ಕೋಟಿ ರೂ.) ಘಾಟಿ ಸುಬ್ರಮಣ್ಯ ದೇವಾಲಯ (8-10 ಕೋಟಿ ರೂ) ಬೆಂಗಳೂರಿನ ಬನಶಂಕರಿ ದೇವಾಲಯ (8-10 ಕೋಟಿ ರೂ) ದೊಡ್ಡಬಳ್ಳಾಪುರ ಘಾಟಿ ಸುಬ್ರಮಣ್ಯ ದೇವಸ್ಥಾನಗಳು ಸ್ಥಾನ ಪಡೆದಿವೆ.