Job Description: ಮಸ್ಕಟ್, ಜ.11-ಆಧುನಿಕ ಅರಬ್ ಜಗತ್ತಿನ ದೀರ್ಘಾವಧಿ ನಾಯಕರಾಗಿದ್ದ ಓಮನ್ ಸುಲ್ತಾನ ಕಾಬೂಸ್(79) ನಿನ್ನೆ ನಿಧನರಾದರು. ಕರಳು ಕ್ಯಾನ್ಸರ್‍ನಿಂದ ನರಳುತ್ತಿದ್ದ ಅವರು ಕೆಲ ಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಸುಲ್ತಾನ್‍ಕಾಬೂಸ್ ಬಿನ್ ಸೈದ್ ಅವರ ನಿಧನರಾದರೆಂದು ತಿಳಿಸಲು ತುಂಬಾ ದುಃಖವಾಗುತ್ತದೆ ಎಂದು ರಾಯಲ್ ಕೋರ್ಟ್ (ಅರಮನೆ ಆಸ್ಥಾನ) ತಿಳಿಸಿದೆ.1970ರಲ್ಲಿ ಅರಮನೆಯಲ್ಲಿ ನಡೆದ ಕ್ಷಿಪ್ರ ಕ್ರಾಂತಿಯಲ್ಲಿ ತಂದೆಯನ್ನು ಪದಚ್ಯುತಗೊಳಿಸಿ ಕಾಬೂಸ್ ಅರಸೊತ್ತಿಗೆಯ ಗದ್ದುಗೇರಿದ್ದರು.