Job Description: ಟೆಹರಾನ್, ಜ. 7: ಅಮೆರಿಕದ ಎಲ್ಲ ಸೈನಿಕರನ್ನು 'ಭಯೋತ್ಪಾದಕರು' ಎಂಬುದಾಗಿ ಘೋಷಿಸುವ ಮಸೂದೆಯೊಂದನ್ನು ಇರಾನ್ ಸಂಸತ್ತು ಮಂಗಳವಾರ ಅಂಗೀಕರಿಸಿದೆ. ಇರಾನ್‌ನ ಸೇನಾ ವಿಭಾಗ ರೆವಲೂಶನರಿ ಗಾರ್ಡ್ಸ್‌ನ ವಿದೇಶಿ ಕಾರ್ಯಾಚರಣೆ ಘಟಕ ಖುದ್ಸ್ ಫೋರ್ಸ್‌ನ ಮುಖ್ಯಸ್ಥ 62 ವರ್ಷದ ಕಾಸಿಮ್ ಸಲೈಮಾನಿ ಕಳೆದ ವಾರ ಅಮೆರಿಕ ನಡೆಸಿದ ವಾಯು ದಾಳಿಯಲ್ಲಿ ಮೃತಪಟ್ಟಿರುವುದಕ್ಕೆ ಪ್ರತೀಕಾರವಾಗಿ ಇರಾನ್ ಈ ಕ್ರಮ ತೆಗೆದುಕೊಂಡಿದೆ.