Job Description: ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಇದೀಗ ಮಹತ್ತರ ಕಾರ್ಯಮಾಡಿದ್ದು, ದೆಹಲಿಯಲ್ಲಿ ಗಾಳಿ ಶುದ್ಧೀಕರಣ ಟವರ್ ಅವರನ್ನು ಉದ್ಘಾಟಿಸಿದ್ದು ಇದು ದೇಶದಲ್ಲಿ ಮೊದಲ ಗಾಳಿ ಶುದ್ಧೀಕರಣ ಟವರ್ ಆಗಿದೆ. ವಿಪರೀತ ವಾಯುಮಾಲಿನ್ಯವಿರುವ ದೆಹಲಿಯ ಲಜಪತ್ ನಗರದ ಕೇಂದ್ರೀಯ ಮಾರುಕಟ್ಟೆಯಲ್ಲಿ 7 ಲಕ್ಷ ರೂ ವೆಚ್ಚದಲ್ಲಿ 20 ಅಡಿ ಎತ್ತರವಿರುವ ಗಾಳಿ ಶುದ್ಧೀಕರಣ ಟವರ್ ಸ್ಥಾಪಿಸಲಾಗಿದೆ. ಇಲ್ಲಿ ಪ್ರತಿನಿತ್ಯ 15 ಸಾವಿರ ಮಂದಿ ಸಂಚರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಈ ಟವರ್ ನಿರ್ಮಿಸಲಾಗಿದೆ. ಲಜಪತ್ ನಗರದ ವರ್ತಕರ ಸಂಘವು ಸಂಸದ ಗೌತಮ್ ಗಂಭೀರ್ ಸಹಕಾರದೊಂದಿಗೆ ಸೇರಿ ಈ ಟವರ್ ನಿರ್ಮಿಸಲಾಗಿದೆ. ಇದು 80%ರಷ್ಟು ವಾಯುಮಾಲಿನ್ಯ ನಿಯಂತ್ರಿಸಲಿದೆ. ಈ ಟವರ್ ಗೆ ತನ್ನ ಸುತ್ತಿಲಿನ 500-750 ಮೀಟರ್ ವ್ಯಾಪ್ತಿಯ ಮಾಲಿನ್ಯ ನಿಯಂತ್ರಿಸುವ ಸಾಮರ್ಥ್ಯ ಹೊಂದಿದೆ.