Job Description: ಮಂಗಳೂರು: ಬೊಳುವಾರು ಮಹಮ್ಮದ್ ಕುಂಞಿ ಅವರಿಗೆ ಈ ಸಾಲಿನ ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ ನೀಡಲಾಗುವುದು ಎಂದು ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ, ಸಾಹಿತಿ ನಾ.ಡಿಸೋಜ ಹೇಳಿದ್ದಾರೆ. ಕನ್ನಡದ ಸೃಜನಶೀಲ ಬರಹಗಾರ ಎಂದೇ ಬೊಳುವಾರು ಮಹಮದ್ ಕುಂಞಿ ಅವರು ಖ್ಯಾತರಾಗಿದ್ದಾರೆ. ಅವರು ಬರೆದ ಮೂರನೇ ಕಾದಂಬರಿ 'ಓದಿರಿ' ಕನ್ನಡ ಸಾಹಿತ್ಯ ವಲಯದಲ್ಲಿ ಜನಪ್ರಿಯತೆ ಪಡೆದಿದೆ. ಇದರಲ್ಲಿ ಪ್ರವಾದಿ ಮಹಮದರ ಜೀವನವನ್ನು ಜನಪದ ನಾಯಕನ ಬದುಕಿನ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. 2016ರಲ್ಲಿ ಬೊಳುವಾರು ಮಹಮ್ಮದ್ ಕುಂಞಿ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ.