Job Description: ನವದೆಹಲಿ (ಪಿಟಿಐ): ನಿರೀಕ್ಷಿತ ಮಟ್ಟದಲ್ಲಿ ವರಮಾನ ಸಂಗ್ರಹವಾಗದ ಕಾರಣ ಕೇಂದ್ರ ಸರ್ಕಾರವು ಜನವರಿ–ಮಾರ್ಚ್ ತ್ರೈಮಾಸಿಕಕ್ಕೆ ತನ್ನ ವೆಚ್ಚದಲ್ಲಿ ಕಡಿತ ಮಾಡಲು ನಿರ್ಧರಿಸಿದೆ. ಏಪ್ರಿಲ್–ನವೆಂಬರ್ ಅವಧಿಗೆ ಜಿಎಸ್ಟಿ ಸಂಗ್ರಹದಲ್ಲಿ ಶೇ 40ರಷ್ಟು ಇಳಿಕೆಯಾಗಿದೆ. ಇದರಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ವೆಚ್ಚದಲ್ಲಿ ಇಳಿಕೆ ಮಾಡುವುದು ಅನಿವಾರ್ಯವಾಗಿದೆ. ಬಜೆಟ್ ಅಂದಾಜಿನಲ್ಲಿ ಜನವರಿ–ಮಾರ್ಚ್ ಅವಧಿಗೆ ಶೇ 33ರಷ್ಟು ವೆಚ್ಚಮಾಡಲು ನಿರ್ಧರಿಸಲಾಗಿತ್ತು. ಆದರೆ, ಅದನ್ನು ಶೇ 25ಕ್ಕೆ ಇಳಿಕೆ ಮಾಡಲಾಗಿದೆ. ಈ ಅವಧಿಯ ಮೊದಲ ಎರಡು ತಿಂಗಳಿನಲ್ಲಿ ವೆಚ್ಚದ ಪ್ರಮಾಣ ಶೇ 15ನ್ನು ಮೀರಬಾರದು ಎಂದೂ ಹೇಳಿದೆ. ವೆಚ್ಚವನ್ನು ಮಿತಿಗೊಳಿಸುವಂತೆ ಎಲ್ಲಾ ವಿಭಾಗಗಳಿಗೆ ಸೂಚನೆಯನ್ನೂ ನೀಡಿದೆ.