Job Description: * ಪ್ರಸಕ್ತ ವರ್ಷದ 'ಪ್ರವಾಸಿ ಭಾರತೀಯ ಸಮ್ಮಾನ್' ಪುರಸ್ಕಾರಕ್ಕೆ ಆಯ್ಕೆಯಾಗಿರುವ 21 ಸಾಧಕರಲ್ಲಿ ಇಲ್ಲಿನ ಸುಪ್ರಸಿದ್ದ ಹೋಟೆಲ್ ಉದ್ಯಮಿ ರೀನಾ ವಿನೋದ್ ಪುಷ್ಕ ರ್ಣ ಸೇರಿದ್ದಾರೆ. ಭಾರತದ ಅಭಿವೃ ದ್ದಿಗೆ ಶ್ರಮಿಸುವ ಸಾಗರೋತ್ತರ ಭಾರತೀಯರಿಗೆ ನೀಡು ವ ಅತ್ಯು ನ್ನತ ಗೌರವ ಇದಾಗಿದ್ದು, ಜನವರಿ 8ರಂದು ಮಧ್ಯ ಪ್ರದೇಶದ ಇಂದೋ ರ್‌ನಲ್ಲಿ ನಡೆಯಲಿರುವ 'ಪ್ರವಾಸಿ ಭಾರತೀಯ ದಿವಸ್' ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನಿಸಲಾಗುತ್ತದೆ.* ಭಾರತ-ಇಸ್ರೇಲ್ ನಡುವಿನ ವ್ಯಾಪಾರ ಮತ್ತು ಸಾಂಸ್ಕೃತಿಕ ವಲಯದಲ್ಲಿ ಎದ್ದುಕಾಣುವ ಹೆಸರಾಗಿರುವ ರೀನಾ, ಪ್ರಧಾನಿ ನರೇಂದ್ರ ಮೋದಿಯವರು 2017ರಲ್ಲಿ ಇಸ್ರೇಲ್‌ಗೆ ಭೇಟಿ ನೀಡಿದ್ದಾಗ ಅಡುಗೆ ಸಿದ್ಧಪಡಿಸಿದ ತಂಡದ ಪ್ರಮುಖರಾಗಿದ್ದರು.