Job Description: * ಮಾನವ ಮೃತದೇಹವನ್ನು ಗೊಬ್ಬರವನ್ನಾಗಿ ಪರಿವರ್ತಿಸುವ " (ಡ್ಯೂಮನ್ ಕಾಂಪೋಸ್ಟಿಂಗ್) 'ಹಸಿರು ಅಂತ್ಯಕ್ರಿಯೆ'ಗೆ ಅಮೆರಿಕದ ನ್ಯೂಯಾರ್ಕ್ ರಾಜ್ಯ ಅನುಮೋದನೆ ನೀಡಿದೆ. * ಮೃತಪಟ್ಟ ವ್ಯಕ್ತಿಗಳ ದೇಹವನ್ನು ವೈಜ್ಞಾನಿಕ ಪ್ರಕ್ರಿಯೆಗಳ ಮೂಲಕ ಗೊಬ್ಬರವನ್ನಾಗಿ ಪರಿವರ್ತಿಸುವುದನ್ನು ಹೂಮನ್ ಕಾಂಪೋಸ್ಟಿಂಗ್ ಅಥವಾ ಹಸಿರು ಅಂತ್ಯಕ್ರಿಯೆ ಎನ್ನುತ್ತಾರೆ. ಅಮೆರಿಕದ ನ್ಯೂಯಾರ್ಕ್ ಈ ಪ್ರಕ್ರಿಯೆಗೆ ಒಪ್ಪಿಗೆ ನೀಡಿದ ಆರನೇ ರಾಜ್ಯವಾಗಿದೆ. ವಾಷಿಂಗ್ಟನ್ ಮೊದಲ ರಾಜ್ಯವಾಗಿದೆ. ನಂತರ ಕೊಲರಾಡೊ, ಒರಿಗಾನ್, ವೆರ್ಮೆಂಟೊ ಮತ್ತು ಕ್ಯಾಲಿಫೋರ್ನಿಯಾ ರಾಜ್ಯಗಳು ಕೂಡ ಇದನ್ನು ಕಾನೂನುಬದ್ಧಗೊಳಿಸಿದ್ದವು.* ಮೃತ ದೇಹವನ್ನು ಮುಚ್ಚಿದ ಪೆಟ್ಟಿಗೆಯಲ್ಲಿರಿಸಿ ಮರದ ತುಂಡುಗಳು, ಒಣ ಹುಲ್ಲು ಮತ್ತಿತರ ವಸ್ತುಗಳನ್ನಿರಿಸಿ ದೇಹವನ್ನು ಮಣ್ಣಾಗಿ ಪರಿವರ್ತಿಸಲಾಗುತ್ತದೆ. ಸೂಕ್ಷ್ಮ ಜೀವಿಗಳ ಪ್ರಕ್ರಿಯೆಯಿಂದ ದೇಹ ಮಣ್ಣಾಗುತ್ತದೆ. ಅದನ್ನು ಗೊಬ್ಬರವಾಗಿ ಬಳಸಲಾಗುತ್ತದೆ. ಮೃತ ದೇಹವನ್ನು ಸುಡುವ ಅಥವಾ ಹೂಳುವ ಪ್ರಕ್ರಿಯೆಗಿಂತ ಡ್ಯೂಮನ್ ಕಾಂಪೋಸ್ಟಿಂಗ್ ಪ್ರಕ್ರಿಯೆ ಪರಿಸರ-ಸ್ನೇಹಿ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.