Job Description: * ಆಗ್ರಾದಲ್ಲಿರುವ ವಿಶ್ವವಿಖ್ಯಾತ ತಾಜ್‌ಮಹಲ್ ಸ್ಮಾರಕವನ್ನು ಮನೆಯಾಗಿ ಪರಿಗಣಿಸಿರುವ ಸ್ಥಳೀಯ ಆಗ್ರಾ ಮಹಾನಗರ ಪಾಲಿಕೆ ಈಗ ಈ ಸ್ಮಾರಕ ಮೇಲೆ 1.47 ಲಕ್ಷ ರೂ.ಗಳ ಗೃಹ ತೆರಿಗೆ ವಿಧಿಸಿದೆ. ತಾಜ್ ಮಹಲ್ ನಿರ್ವಹಣೆ ಹೊಣೆ ಭಾರತೀಯ ಪ್ರಾಕ್ತನ ಇಲಾಖೆ (ಎಎಸ್‌ಐ)ಗೆ ಸೇರಿದೆ.* 1920ರಿಂದಲೂ ಸಂರಕ್ಷಿತ ಸ್ಮಾರಕ ಎಂದು ಘೋಷಿಸಲ್ಪಟ್ಟಿರುವ ತಾಜ್‌ಮಹಲ್ ಕಟ್ಟಡವನ್ನು ಯಾವತ್ತೂ ಮನೆಯಾಗಿ ಪರಿಗಣಿಸಿದ್ದಿಲ್ಲ ಎಂದು ಹೇಳಿದ ಎಎಸ್‌ಐ ಅಧಿಕಾರಿಗಳು . ಅದೇನಿದ್ದರೂ ಒಂದು ವೇಳೆ ಈ ತೆರಿಗೆ ಪಾವತಿಸದಿದ್ದರೆ ತಾಜ್‌ಮಹಲನ್ನೇ ಮುಟ್ಟುಗೋಲು ಹಾಕಿಕೊಳ್ಳುವುದಾಗಿಯೂ ಮಹಾನಗರ ಪಾಲಿಕೆ ಎಚ್ಚರಿಕೆ ನೀಡಿದೆ.