Job Description: * ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲೇ(Greg Barclay) ಅವರು ಕ್ರಿಕೆಟ್‌ನ ಅತ್ಯುನ್ನತ ಸಂಸ್ಥೆಯಾದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC chairman) ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ. ಮುಂದಿನ ಎರಡು ವರ್ಷಗಳ ಕಾಲ ಅವರು ಈ ಹುದ್ದೆಯನ್ನು ಅಲಂಕರಿಸಿರುತ್ತಾರೆ. * ಎರಡನೇ ಬಾರಿಗೆ ಇದು ಅವರ ಅಧ್ಯಕ್ಷ ಪದವಿಯಾಗಿದೆ. ಇದಕ್ಕೂ ಮೊದಲು, ಬಾರ್ಕ್ಲಿ ನವೆಂಬರ್ 2020 ರಲ್ಲಿ ಐಸಿಸಿ ಚುನಾವಣೆಯಲ್ಲಿ ಗೆದ್ದಿದ್ದರು.* ನವೆಂಬರ್ 12 ರಂದು ಮೆಲ್ಬೋರ್ನ್‌ನಲ್ಲಿ ನಡೆದ ಐಸಿಸಿಯ ತ್ರೈಮಾಸಿಕ ಸಭೆಯಲ್ಲಿ ಮತದಾನ ನಡೆಯಿತು. ವಿದ್ಯುನ್ಮಾನ ಮತದಾನ ಪ್ರಕ್ರಿಯೆಯಲ್ಲಿ ಟೆಸ್ಟ್ ಆಡುವ ದೇಶಗಳ 12 ಪೂರ್ಣ ಸದಸ್ಯರು, ಮೂರು ಅಸೋಸಿಯೇಟ್ ದೇಶಗಳು ಮತ್ತು ಸ್ವತಂತ್ರ ಮಹಿಳಾ ನಿರ್ದೇಶಕಿ (ಪೆಪ್ಸಿಕೋದ ಇಂದ್ರಾ ನೂಯಿ) ಸೇರಿದಂತೆ 16 ನಿರ್ದೇಶಕರ ಮಂಡಳಿಗಳು ಭಾಗವಹಿಸಿದ್ದರು.* ಜಿಂಬಾಬ್ವೆ ಕ್ರಿಕೆಟ್ ಅಧ್ಯಕ್ಷ ಟ್ವೆಂಗ್ವಾ ಮುಕುಹಲಾನಿ ಅವರು ಬಾರ್ಕ್ಲೇ ವಿರುದ್ಧ ಯಾವುದೇ ಅಭ್ಯರ್ಥಿಗಳನ್ನು ನಿಲ್ಲಿಸದೆ ಚುನಾವಣಾ ಪ್ರಕ್ರಿಯೆಯಿಂದ ಹಿಂದೆ ಸರಿದ ನಂತರ ಮಾಜಿ ನ್ಯೂಜಿಲೆಂಡ್ ಕ್ರಿಕೆಟಿಗನಿಗೆ ಚುಕ್ಕಾಣಿ ಹಿಡಿಯಲು ICC ಮಂಡಳಿಯು ತನ್ನ ಸಂಪೂರ್ಣ ಬೆಂಬಲವನ್ನು ಪುನರುಚ್ಚರಿಸಿತು. ಈ ಮೂಲಕ ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲಿ 2 ನೇ ಬಾರಿಗೆ ಅವಿರೋಧವಾಗಿ ಐಸಿಸಿ ಅಧ್ಯಕ್ಷರಾದರು. ಈ ಮೂಲಕ ಮತ್ತೊಮ್ಮೆ ಗ್ರೆಗ್ ಆಯ್ಕೆ ಆಗಿದ್ದಾರೆ.* ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆಯಾದ ಮೇಲೆ ಬಾರ್ಕ್ಲೇ ಮಾಧ್ಯದ ಹೇಳಿಕೆ ನೀಡಿರುವ ಅವರು, "ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಮರು ಆಯ್ಕೆಯಾಗಿರುವುದು ಗೌರವವಾಗಿದೆ ಮತ್ತು ಅವರ ಬೆಂಬಲಕ್ಕಾಗಿ ನನ್ನ ಸಹ ಐಸಿಸಿ ನಿರ್ದೇಶಕರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ."ಎಂದು ಹೇಳಿದರು.