Job Description: * ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ(Bengaluru) ನಾಡಪ್ರಭು ಕೆಂಪೇಗೌಡರ (Statue of Kempegowda) 108 ಅಡಿಯ ಕಂಚಿನ ಪ್ರತಿಮೆ ಲೋಕಾರ್ಪಣೆ ಮಾಡಿದ್ದಾರೆ.* ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ(Kempegowda International Airport) ಸಮೀಪ ಅನಾವರಣಗೊಂಡಿರುವ 108 ಅಡಿ ಎತ್ತರದ ಪ್ರತಿಮೆ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿದ್ದು ಇದಕ್ಕೆ ಪ್ರಗತಿಯ ಪ್ರತಿಮೆ(Statue of Prosperity) ಎಂದು ಕರ್ನಾಟಕ ಸರ್ಕಾರ ನಾಮಕರಣ ಮಾಡಿದೆ.* ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಗರ ನಿರ್ಮಾತೃ ಒಬ್ಬರ ವಿಶ್ವದ ಅತಿ ಎತ್ತರದ ಪ್ರತಿಮೆ ಇದು ಎಂಬ ಹೆಗ್ಗಳಿಕೆಗೆ ಪಡೆದಿರುವುದು ವಿಶೇಷ. ಗುಜರಾತ್‌ನಲ್ಲಿ ಏಕತಾ ಪ್ರತಿಮೆ ನಿರ್ಮಾಣ ಮಾಡಿದ ರಾಮ್ ಸುತಾರ್(Ram V Sutar) ಕ್ರಿಯೇಷನ್ಸ್ ಅವರೇ ಈ ಕೆಂಪೇಗೌಡ ಪ್ರತಿಮೆಯ ವಿನ್ಯಾಸ ಹಾಗೂ ನಿರ್ಮಾಣ ಮಾಡಿದ್ದಾರೆ.* ಈ ಪ್ರತಿಮೆ ನಿರ್ಮಾಣಕ್ಕೆ 84 ಕೋಟಿ ರೂ. ಖರ್ಚು ಮಾಡಲಾಗಿದ್ದು, ಪ್ರತಿಮೆಯ ಖಡ್ಗವೇ 4 ಸಾವಿರ ಕೆಜಿ ತೂಕ ಹೊಂದಿದೆ. 120 ಟನ್ ಉಕ್ಕನ್ನು ಪ್ರತಿಮೆ ನಿರ್ಮಾಣಕ್ಕೆ ಬಳಕೆ ಮಾಡಲಾಗಿದೆ. 98 ಟನ್‌ ಕಂಚನ್ನು ಬಳಕೆ ಮಾಡಲಾಗಿದೆ.* ಈ ಪ್ರತಿಮೆ ಬೆಂಗಳೂರು ನಗರದಲ್ಲಿಯೇ ಅತಿ ಎತ್ತರದ ಪ್ರತಿಮೆಯಾಗಿದ್ದು, ಪ್ರತಿಮೆ ಜಾಗದಲ್ಲಿಯೇ 23 ಎಕರೆ ಪ್ರದೇಶದಲ್ಲಿ ಕೆಂಪೇಗೌಡ ಥೀಮ್ ಪಾರ್ಕ್ ನಿರ್ಮಾಣವಾಗಲಿದೆ.